ಕೈಯ್ಯಲ್ಲೇ ದೊಣ್ಣೆ, ಬಡಿಗೆಗಳು ಇರುವಾಗ RSS ನಾಯಕರಿಗೆ ಹೆಚ್ಚಿನ ಭದ್ರತೆ ಯಾವ ಕಾರಣಕ್ಕೆ? ಪ್ರಿಯಾಂಕ್ ಪ್ರಶ್ನೆ

ಬೆಂಗಳೂರು: ಕೆಲವು ಹಿಂದಷ್ಟೇ ರಾಷ್ಟ್ರೀಯ ಸ್ವಯಂಸೇವಕ ಸಂಘ ನಿಷೇಧ ಚರ್ಚೆಗೆ ಮುನ್ನುಡಿ ಬರೆದಿರುವ ಸಚಿವ ಪ್ರಿಯಾಂಕ್ ಖರ್ಗೆ, ಇದೀಗ RSS ನಾಯಕರಿಗೆ ಒದಗಿಸುವ ಭದ್ರತೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ NGOಗಳೆಲ್ಲವೂ ನೋಂದಣಿ ಮಾಡಿಸಿಕೊಂಡಿವೆ, ಪ್ರತಿ ವರ್ಷ ಐಟಿ ಫೈಲ್ ಮಾಡುತ್ತವೆ, ತಮ್ಮ ಆದಾಯ ಅಥವಾ ದೇಣಿಗೆಯ ಮಾಹಿತಿಗಳನ್ನು ಸರ್ಕಾರಕ್ಕೆ ತಿಳಿಸುತ್ತವೆ. ಆರೆಸ್ಸೆಸ್ NGO ಆಗಿದ್ದರೆ ಈ ಪ್ರಕ್ರಿಯೆ ನಡೆಸದೆ ಇರುವುದೇಕೆ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.


ಒಂದು NGO ಮುಖ್ಯಸ್ಥರಿಗೆ ಅತಿ ಭದ್ರತೆಯ ಲಿಐಸನ್ ಪ್ರೊಟೊಕಾಲ್ ಸೆಕ್ಯೂರಿಟಿ ನೀಡಿರುವುದೇಕೆ? ಒಂದೇ ಒಂದು ರೂಪಾಯಿ ತೆರಿಗೆ ನೀಡದ ಯಕಶ್ಚಿತ್ NGO ಮುಖ್ಯಸ್ಥನಿಗೆ ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುವಂತಹ ಅನಿವಾರ್ಯ ಏನಿದೆ? ಇವರ ಕೈಯ್ಯಲ್ಲೇ ದೊಣ್ಣೆ, ಬಡಿಗೆಗಳು ಇರುವಾಗ ಹೆಚ್ಚಿನ ಭದ್ರತೆ ಯಾವ ಕಾರಣಕ್ಕೆ? ಏನು ಪ್ರಶ್ನಿಸಿ ಪ್ರಿಯಾಂಕ್ ಖರ್ಗೆ ಅವರು ತಮ್ಮ ‘X’ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ.

ನಾವು ಆರೆಸ್ಸೆಸ್ ನಿಂದ ಅಕೌಂಟೆಬಲಿಟಿಯನ್ನು ಕೇಳಿದರೆ ಮೈ ಮೇಲೆ ಚೇಳು ಬಿದ್ದವರಂತೆ ಆಡುವುದೇಕೆ? ಎಂದು ಪ್ರಶ್ನೆ ಮಾಡಿರುವ ಅವರು, ಈ ದೇಶದ ಬಹುಸಂಖ್ಯಾತರು RSS ನ್ನು ಆಪ್ಪಿಕೊಂಡೂ ಇಲ್ಲ, ಒಪ್ಪಿಕೊಂಡೂ ಇಲ್ಲ. ಇವರು ಈ ದೇಶಕ್ಕಿಂತ, ಸಂವಿಧಾನಕ್ಕಿಂತ, ಕಾನೂನಿಗಿಂತ ದೊಡ್ಡರೂ ಅಲ್ಲ, ಅತೀತರೂ ಅಲ್ಲ ಎಂದಿದ್ದಾರೆ.

Leave a Reply

Your email address will not be published. Required fields are marked *