ಬೆಂಗಳೂರು: ಸಂವಿಧಾನದ ನಾಲ್ಕನೇ ಸ್ತಂಭವೆಂದು ಗುರುತಿಸಲ್ಪಟ್ಟ ಪತ್ರಿಕೋದ್ಯಮವು ಇದೀಗ ಡಿಜಿಟಲ್ ಯುಗದಲ್ಲಿ ಹೊಸ ರೂಪ ಪಡೆದುಕೊಂಡಿದೆ. ತಂತ್ರಜ್ಞಾನದಿಂದ ಬಂದ ಬದಲಾವಣೆ ಪತ್ರಿಕಾ ವೃತ್ತಿಗೆ ಹೊಸ ಚೈತನ್ಯ ನೀಡಿದೆ. ಅದರ ಪರಿಣಾಮವಾಗಿ, ಪತ್ರಿಕೋದ್ಯಮ ಮತ್ತು ಸಂವಹನ ಶಿಕ್ಷಣಕ್ಕೂ ಹಿಂದೆಂದಿಗಿಂತ ಹೆಚ್ಚಾದ ಪ್ರಾಮುಖ್ಯತೆ ಸಿಗುತ್ತಿದೆ.
ಕೆಲವು ಪತ್ರಿಕೆಗಳು ಮತ್ತು ನ್ಯೂಸ್ ಚಾನಲ್ಗಳು ಸ್ಥಗಿತಗೊಂಡಿರುವ ಸಂದರ್ಭಗಳು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಉದ್ಯೋಗದ ಅನಿಶ್ಚಿತತೆ ಕುರಿತ ಆತಂಕ ಮೂಡಿಸಿದ್ದರೂ, ವಾಸ್ತವ ಚಿತ್ರ ಬೇರೆಯಾಗಿದೆ.
ಎಲ್ಲ ಕ್ಷೇತ್ರಗಳಲ್ಲಿಯೂ ಅವಕಾಶ
ಇತರೆ ಪದವೀಧರರಿಗಿಂತ ಪತ್ರಿಕೋದ್ಯಮ ಅಥವಾ BSW ಪದವೀಧರರಿಗೆ ವ್ಯಾಪಕ ಉದ್ಯೋಗಾವಕಾಶಗಳಿವೆ. ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು, ಬ್ಯಾಂಕ್ಗಳು, ಆಸ್ಪತ್ರೆಗಳು, ಸಹಕಾರ ಸಂಘಗಳು, ಮತ್ತು ಎನ್ಜಿಓ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ (PRO) ಹುದ್ದೆಗಳು ಲಭ್ಯವಿವೆ. ಅನುಭವದ ಆಧಾರದ ಮೇಲೆ ಇಂತಹ ಹುದ್ದೆಗಳಿಗೆ ಪತ್ರಿಕೋದ್ಯಮ ಹಿನ್ನೆಲೆಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತಿದೆ.
ಡಾ.ಮಹೇಶ್ ವಾಳ್ವೇಕರ್
“ಈಗ ಪತ್ರಿಕೋದ್ಯಮ ಶಿಕ್ಷಣವು ಮಾಧ್ಯಮ ಕ್ಷೇತ್ರಕ್ಕಷ್ಟೇ ಅಲ್ಲ, ಎಲ್ಲಾ ಕ್ಷೇತ್ರಗಳಿಗೂ ಅನಿವಾರ್ಯ. ಈ ಹಿಂದೆ ಪತ್ರಿಕೋದ್ಯಮ ಶಿಕ್ಷಣವು ಮಾಧ್ಯಮ ಕ್ಷೇತ್ರಕ್ಕಷ್ಟೇ ಸೀಮಿತವಾಗಿತ್ತು. ಆದರೆ, ಇಂದಿನ ಜಾಗತಿಕ ಕಾಲಘಟ್ಟದಲ್ಲಿ ಈ ಶಿಕ್ಷಣ ಆರೋಗ್ಯ, ಸಾಮಾಜಿಕ, ವಾಣಿಜ್ಯ, ಕೈಗಾರಿಕಾ ಕ್ಷೇತ್ರಗಳಲ್ಲೂ ಪತ್ರಿಕೋದ್ಯಮ ಶಿಕ್ಷಿತರಿಗೆ ಅಪರಿಮಿತ ಅವಕಾಶಗಳು ಸೃಷ್ಟಿಯಾಗುತ್ತಿವೆ. ಎಲ್ಲಾ ಕಂಪನಿಗಳು ಸಾರ್ವಜನಿಕ ಸಂಪರ್ಕಾಧಿಕಾರಿಗಳನ್ನು ನೇಮಕ ಮಾಡುತ್ತಿವೆ. ಇದರಿಂದಾಗಿ ಪತ್ರಿಕೋದ್ಯಮ ಶಿಕ್ಷಣ ಪಡೆದವರಿಗಾಗಿ ದೇಶವ್ಯಾಪಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಿವೆ. ಬಹುತೇಕ ಪತ್ರಕರ್ತರೂ ಈಗ ಕಂಪನಿಗಳಿಗೆ ಮಾಧ್ಯಮ ಕಾರ್ಯದರ್ಶಿ ಅಥವಾ ಮಾಧ್ಯಮ ಸಲಹೆಗಾರರಾಗಿ ಸೇರಿಕೊಳ್ಳುತ್ತಿದ್ದಾರೆ. ಈ ರೀತಿಯಾಗಿ ಪತ್ರಿಕೋದ್ಯಮ ಎಲ್ಲಾ ಕ್ಷೇತ್ರಗಳಿಗೆ ಆಧಾರವಾಗಿವೆ” ಎಂದು ಹಿರಿಯ ಮಾಧ್ಯಮ ತಜ್ಞ ಡಾ.ಮಹೇಶ್ ವಾಳ್ವೇಕರ್ ಪ್ರತಿಪಾದಿಸಿದ್ದಾರೆ.
ಇದೇ ರೀತಿ, ಪತ್ರಿಕೋದ್ಯಮ ಪದವೀಧರರನ್ನು “ಟ್ರಬಲ್ ಶೂಟರ್ಗಳು” ಎಂದೇ ಕರೆಯಲಾಗುತ್ತದೆ. ಬರವಣಿಗೆ ಹಾಗೂ ಸಂವಹನ ಕೌಶಲ್ಯದಿಂದಾಗಿ ಮಾರ್ಕೆಟಿಂಗ್, ಆಡಳಿತ, ಮಾನವ ಸಂಪನ್ಮೂಲ ವಿಭಾಗಗಳಲ್ಲಿಯೂ ಅವರಿಗೆ ಬೇಡಿಕೆಯಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು, ತಮ್ಮ ಸಾಮರ್ಥ್ಯವನ್ನು ತೋರಿಸಿದರೆ, ಯಾವುದೇ ವೃತ್ತಿಯಲ್ಲಿ ಹಿಂದುಳಿಯುವ ಸಂದರ್ಭ ಎದುರಾಗುವುದಿಲ್ಲ.
ವಿದ್ಯಾರ್ಥಿಗಳಿಗೆ ತರಬೇತಿ ಮತ್ತು ಅನುಭವ
ಪತ್ರಿಕೋದ್ಯಮ ಪದವಿ ಓದುತ್ತಿರುವ ವೇಳೆಗಾಗಲೇ ಪತ್ರಕರ್ತನಾಗಿ ಗುರುತಿಸಿಕೊಳ್ಳುವ ಅವಕಾಶವೂ ಸಿಗುತ್ತದೆ. Karnataka Media Council (KMC) ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಮಾದರಿಯ ಅವಕಾಶ ಒದಗಿಸಿದೆ. ಸಂಸ್ಥೆಯು ಗುರುತಿಸಿರುವ ಮಾಧ್ಯಮ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ.
ಯಾವುದೇ ಕಾಲೇಜಿನಲ್ಲಿ ಕಲಿಯುತ್ತಿದ್ದರೂ KMC ಜೊತೆ ಗುರುತಿಸಿಕೊಳ್ಳಬಹುದು. ಮೊದಲ ವರ್ಷದ ಪದವಿಯಿಂದಲೇ ‘ಟ್ರೈನೀ ಕರೆಸ್ಪಾಂಡೆಂಟ್’ ಆಗಿ ಗುರುತಿಸಿಕೊಳ್ಳುವ ಅವಕಾಶ ಸಿಗುತ್ತದೆ. ವಿದ್ಯಾರ್ಥಿಗಳ ವರದಿ ಹಾಗೂ ಲೇಖನಗಳನ್ನು ಮಾಧ್ಯಮಗಳಲ್ಲಿ ಪ್ರಕಟಿಸಲಾಗುತ್ತಿದ್ದು, ಅವರಿಗೆ KMC ಹಾಗೂ ಆಯ್ದ ಮಾಧ್ಯಮಗಳಿಂದ ಪ್ರೆಸ್ ಕಾರ್ಡ್ ನೀಡಲಾಗುತ್ತದೆ.
ಪ್ರತಿ ವರ್ಷ ಇಂಟರ್ನ್ಶಿಪ್ ಪ್ರಮಾಣಪತ್ರ ಮತ್ತು ಪದವಿ ಪೂರ್ಣಗೊಳಿಸುವ ವೇಳೆಗೆ ಮೂರು ವರ್ಷದ ಅನುಭವ ಪತ್ರ ನೀಡಲಾಗುತ್ತದೆ. ಇದು ಭವಿಷ್ಯದ ಉದ್ಯೋಗ ಆಯ್ಕೆಯ ಸಂದರ್ಭದಲ್ಲಿ ಪ್ರಮುಖ ದಾಖಲೆ ಆಗಲಿದೆ.
ಆಲ್ವಿನ್ ಮೆಂಡೋನ್ಸಾ
“ಸಾಧನೆಗೆ ಪತ್ರಿಕೋದ್ಯಮ ಪದವಿಯೊಂದೇ ಸಾಲದು. ಪತ್ರಿಕೋದ್ಯಮ ಅನುಭವ ಇದ್ದಲ್ಲಿ ಯಾವುದೇ ಪದವೀಧರರು ಯಶಸ್ಸು ಸಾಧಿಸಬಹುದು. ಯಾಕೆಂದರೆ, ಪತ್ರಿಕೋದ್ಯಮ ಅನುಭವ ಇದ್ದಲ್ಲಿ ಅಂಥವರು ಮಾರ್ಕೆಟಿಂಗ್, ಕಾಮರ್ಸ್, HR, ಆಡಳಿತ,ಕಾನೂನು ಕ್ಷೇತ್ರಗಳಲ್ಲೂ ಗೆದ್ದು ಬರಬಲ್ಲರು. ಅಂತಹಾ ಅನುಭವವನ್ನು ಕಲಿಕೆಯ ಸಮಯದಲ್ಲೇ ಹೊಂದಿದಲ್ಲಿ, ಪದವಿ ಮುಗಿದ ತಕ್ಷಣ ಆತ ಅನುಭವಿ ಕೆಲಸಗಾರನಾಗಿ ರೂಪುಗೊಳ್ಳಬಲ್ಲ” ಎನ್ನುತ್ತಾರೆ ಟೈಮ್ಸ್ ನೆಟ್ ಸಂಪಾದಕ ಆಲ್ವಿನ್ ಮೆಂಡೋನ್ಸಾ.
ತರಬೇತಿ ಕಾರ್ಯಕ್ರಮ..!
ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಕಲಬುರಗಿ ಮತ್ತು ಮೈಸೂರು ವಿಭಾಗಗಳಲ್ಲಿ ಅಭ್ಯಾಸ ವರ್ಗ ಆಯೋಜಿಸಲಾಗುತ್ತದೆ. ವಿದ್ಯಾರ್ಥಿಗಳು ಈ ಕಾರ್ಯಾಗಾರಗಳಲ್ಲಿ ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ ಬಗ್ಗೆ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳನ್ನು ಪರಿಪೂರ್ಣ ಪತ್ರಕರ್ತರನ್ನಾಗಿಸುವ ಪ್ರಯತ್ನ ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ನಡೆಯುತ್ತದೆ.
ತರಬೇತಿಯಲ್ಲಿ ಸುದ್ದಿ ಬರೆಯುವ ವಿಧಾನ, ತನಿಖಾ ವರದಿ ಸಿದ್ಧಪಡಿಸುವ ಕೌಶಲ್ಯ, ಕ್ರೈಂ ಹಾಗೂ ಕೋರ್ಟ್ ಬೀಟ್ ವರದಿ, ಸಾರ್ವಜನಿಕ ಸಂಪರ್ಕ ಹುದ್ದೆಯ ಕಾರ್ಯಪದ್ಧತಿ ಮುಂತಾದ ವಿಷಯಗಳ ಕುರಿತು ಹಿರಿಯ ಪತ್ರಕರ್ತರು ಮತ್ತು ತಜ್ಞರಿಂದ ಮಾರ್ಗದರ್ಶನ ನೀಡಲಾಗುತ್ತದೆ.
ತರಬೇತಿ ಸಮಯದಲ್ಲಿ ವಿದ್ಯಾರ್ಥಿಗಳು ಸಿದ್ಧಪಡಿಸಿದ ವರದಿಗಳು ಮತ್ತು ಲೇಖನಗಳು ಅವರ ಹೆಸರಿನೊಂದಿಗೆ ಮಾಧ್ಯಮಗಳು ಪ್ರಕಟಿಸಳಿವೆ.
ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧ ಅಸ್ತಿತ್ವದಲ್ಲಿಲ್ಲದ ಕಾನೂನು ಅಸ್ತ್ರ ಪ್ರಯೋಗಿಸಲು ಪ್ರಯತ್ನಿಸುತ್ತಿರುವ ಸರ್ಕಾರಕ್ಕೆ ಮತ್ತೆ ಮತ್ತೆ ಮುಜುಗರದ ಸನ್ನಿವೇಶ ಎದುರಾಗುತ್ತಿದೆ. ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗವಹಿಸಿದ್ದ ಕಾರಣಕ್ಕಾಗಿ ಪಿಡಿಓ ಪ್ರವೀಣ್ ಕುಮಾರ್ ಅವರನ್ನು ಅಮಾನತು […]
ಬೆಂಗಳೂರು: ಚೀನಾದ ಸ್ಮಾರ್ಟ್ಫೋನ್ ತಯಾರಕ ಒಪ್ಪೋ (Oppo) ತನ್ನ ಹೊಸ ಫ್ಲ್ಯಾಗ್ಶಿಪ್ ಸರಣಿ ಫೈಂಡ್ X9 (Find X9) ಮತ್ತು ಫೈಂಡ್ X9 ಪ್ರೊ (Find X9 Pro) ಮಾದರಿಗಳನ್ನು ನವೆಂಬರ್ 18ರಂದು ಭಾರತದಲ್ಲಿ […]
ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣಾ ಫಲಿತಾಂಶದ ಘೋಷಣೆಗೆ ಇನ್ನೂ ಕೆಲವೇ ದಿನಗಳಿರುವುದರ ನಡುವೆ, ಆಡಳಿತಾರೂಢ ಎನ್ಡಿಎ ಶಿಬಿರದಲ್ಲಿ ಈಗಾಗಲೇ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ನಿರ್ಗಮನ ಸಮೀಕ್ಷೆಗಳು ಮೈತ್ರಿಕೂಟದ ಪರವಾಗಿ ಬಿದ್ದ ಹಿನ್ನೆಲೆಯಲ್ಲಿ ಪಾಟ್ನಾದಲ್ಲಿ ವಿಜಯೋತ್ಸವದ […]