(ವರದಿ: ರವಿಕುಮಾರ್ ಜೆ.ಓ.ತಾಳಿಕೆರೆ)
ದಾವಣಗೆರೆ: ಜಗಳೂರು ತಾಲೂಕಿನ ಚಿಕ್ಕ ಮಲ್ಲನಹೊಳೆ, ದಿಬ್ಬದ ಹಳ್ಳಿ ಗ್ರಾಮಗಳಲ್ಲಿ ಶನಿವಾರ ರಾತ್ರಿ 8:00 ಸುಮಾರಿಗೆ ಭಾರಿ ಶಬ್ದ ಕೇಳಿಬಂದಿದೆ. ತಕ್ಷಣ ಭೂಮಿಯು ಕಂಪನವಾಗಿದ್ದು ಮನೆಗಳಲ್ಲಿರುವ ಪಾತ್ರೆ ಸಾಮಗ್ರಿಗಳು ಇದ್ದಕ್ಕಿದ್ದಂತೆ ಉರುಳಿಬಿದ್ದಿವೆ. ಮನೆಯಲ್ಲಿದ್ದ ಮಂಚಗಳು ಸಹ ಅಲುಗಾಡಿವೆ. ಈ ಘಟನೆಯಿಂದ ಇಡೀ ಗ್ರಾಮಸ್ಥರು ಆತಂಕಗೊಂಡರು.
ಶನಿವಾರ ರಾತ್ರಿ ಭಾರಿ ಶಬ್ದದ ನಂತರ ಭೂಮಿಯು ಕಂಪಿಸಿದ್ದು ತೊರೆ ಸಾಲು ಭಾಗದ ಗ್ರಾಮಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಮನೆಯಲ್ಲಿದ್ದ ಪಾತ್ರೆ ಪಡೆದಗಳು ಉರುಳಿ ಬಿದ್ದಿದ್ದು, ಮಾಳಿಗೆ ಮನೆಯೊಂದರ ಮೇಲ್ಚಾವಣಿ ಕುಸಿದುಬಿದ್ದಿವೆ ಮನೆಯಲ್ಲಿ ಕುರ್ಚಿ ಮತ್ತು ಮಂಚಗಳು ಅಲುಗಾಡಿದ್ದು, ಗ್ರಾಮಸ್ಥರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿ ಪಾರಾಗಿದ್ದಾರೆ.
ಜಗಳೂರು ತಾಲೂಕಿನ ಸಿದ್ದಮ್ಮನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ಬಸ್ಸು ಕೂಡ ಅಲುಗಾಡಿದ್ದು ಅದರಲ್ಲಿದ್ದ ಪ್ರಯಾಣಿಕರು ಗಾಬರಿಗೊಂಡರು.
ಮೂರು ತಾಲೂಕುಗಳಲ್ಲಿ ಲಘು ಭೂಕಂಪನ:
ಚಳ್ಳಕೆರೆ ತಾಲೂಕಿನ ಕೊಲಮ್ಮನಹಳ್ಳಿ, ಕೂಡ್ಲಿಗಿ ತಾಲೂಕಿನ ಕಲ್ಲಳ್ಳಿ, ಜಗಳೂರು ತಾಲೂಕಿನ ಚಿಕ್ಕಮಲ್ಲನ ಹೊಳೆ ದಿಬ್ಬಜಹಟ್ಟಿ, ದೊರೆ ಸಾಲು ಬಾಗದ ಇತರೆ ಗ್ರಾಮಗಳಲ್ಲಿ ಭೂಮಿ ಕಂಪಿಸಿದೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಸಿಪಿಐ ಸಿದ್ರಾಮಯ್ಯ, ರೈತ ಸಂಘದ ನಾಯಕ ಮಂಜುನಾಥ್ ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದಾರೆ





