KSET: ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯಲ್ಲಿ  BMTC ನಿರ್ವಾಹಕಿಯ ಯಶೋಗಾಥೆ

ಬೆಂಗಳೂರು: ಛಲವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಈ ಬಿಎಂಟಿಸಿ ಸಿಬ್ಬಂದಿ ಸಾಕ್ಷಿ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ KSET-25: ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯಲ್ಲಿ  ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ನಿರ್ವಾಹಕಿ ಜಯಮ್ಮ ಅವರು ಯಶೋಗಾಥೆ ಬರೆದಿದ್ದಾರೆ. ಪರೀಕ್ಷೆಯಲ್ಲಿ ಅರ್ಹತೆ ಹೊಂದಿರುವ (ಉತ್ತೀರ್ಣರಾಗಿರುವ) ಜಯಮ್ಮ ಅವರು ಇದೀಗ ಸಾರಿಗೆ ವಲಯದಲ್ಲಷ್ಟೇ ಅಲ್ಲ ಶಿಕ್ಷಣ ಕ್ಷೇತ್ರದಲ್ಲೂ ಕುತೂಹಲದ ಕೇಂದ್ರಬಿಂದುವಾಗಿದ್ದರೆ.

ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಜಯಮ್ಮ ಅವರನ್ನು ಅಭಿನಂದಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಟ್ವೀಟ್ ಮಾಡಿದೆ.

ಬೆಂಗಳೂರಿನವರೇ ಆದ ಜಯಮ್ಮ ಕನ್ನಡ ವಿಷಯದಲ್ಲಿ ಕೆಸೆಟ್ ಪರೀಕ್ಷೆ ತೆಗೆದುಕೊಂಡು, ಅರ್ಹರಾಗಿ ಮಹಾತ್ಸಾಧನೆ ಮಾಡಿದ್ದಾರೆ. ನಮ್ಮಂತಹವರೂ ಪರೀಕ್ಷೆಯಲ್ಲಿ ಅರ್ಹತೆ ಪಡೆಯಬಹುದು ಎನ್ನುವುದಕ್ಕೆ KEA ಹಮ್ಮಿಕೊಂಡಿರುವ ಪಾರದರ್ಶಕ ಪರೀಕ್ಷಾ ವ್ಯವಸ್ಥೆಯೇ ಕಾರಣ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇಷ್ಟೇ ಅಲ್ಲ, KEA ನಡೆಸಿದ ಪರೀಕ್ಷೆಯಿಂದಲೇ ಕಂಡಕ್ಟರ್ ಉದ್ಯೋಗ ಸಿಕ್ಕಿತು. ಈಗ ಕೆ-ಸೆಟ್ ಆಗಿದೆ. ಮುಂದೊಂದು ದಿನ ಸಹಾಯಕ ಪ್ರಾಧ್ಯಾಪಕರಾಗುವ ಕನಸು ಇದೆ ಎಂದಿದ್ದಾರೆ. ಈ ಕುರಿತ ವೀಡಿಯೋವನ್ನು ಕೂಡಾ KEA ಪೋಸ್ಟ್ ಮಾಡಿದೆ.

Leave a Reply

Your email address will not be published. Required fields are marked *