ಸೋಮವಾರದ ಒಳಗೆ ಆಶಾ ಕಾರ್ಯಕರ್ತೆಯರ ಬಾಕಿ ಪ್ರೋತ್ಸಾಹಧನ ಬಿಡುಗಡೆ; NHM ಮುಖ್ಯಸ್ಥರ ಭರವಸೆ

ಬೆಂಗಳೂರು: ನಾಲ್ಕೈದು ತಿಂಗಳುಗಳಿಂದ ಬಾಕಿ ಇರುವ ಪ್ರೋತ್ಸಾಹಧನದ ಬಿಡುಗಡೆಗಾಗಿ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಬೆಂಗಳೂರಿನಲ್ಲಿ ಮತ್ತೊಮ್ಮೆ ಪ್ರತಿಭಟನೆ ನಡೆಸಿ ಗಮನಸೆಳೆದಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ “ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ” (AIUTUC) ದ ವತಿಯಿಂದ ಬೆಂಗಳೂರು ವಲಯ ಮಟ್ಟದ ಆಶಾ ಕಾರ್ಯಕರ್ತೆಯರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಳೆದ ನಾಲ್ಕೈದು ತಿಂಗಳುಗಳಿಂದ ಬಾಕಿ ಇರುವ ಎನ್.ಹೆಚ್.ಎಂ. ಪ್ರೋತ್ಸಾಹ ಧನವನ್ನು ಈ ಕೂಡಲೇ ಬಿಡುಗಡೆ ಮಾಡಿ ಹಾಗೂ ಕಳೆದ ಜನವರಿಯಲ್ಲಿ ಮಾನ್ಯ ಮುಖ್ಯಮಂತ್ರಿಗಳು ಮಾತು ಕೊಟ್ಟಂತೆ ಮಾಸಿಕ 10,000 ರೂ. ಗ್ಯಾರಂಟಿಯ ಆದೇಶವನ್ನು ಹೊರಡಿಸಿ ಕೊಟ್ಟ ಮಾತು ಉಳಿಸಿಕೊಳ್ಳಿ ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಲು ಆಶಾ ಕಾರ್ಯಕರ್ತೆಯರು ನೂರಾರು ಸಂಖ್ಯೆಯಲ್ಲಿ ಸೇರಿದ್ದರು.

ಪ್ರತಿಭಟನೆಯ ನಂತರ ಆಶಾ ಸಂಘದ ರಾಜ್ಯ ಉಪಾಧ್ಯಕ್ಷರಾದ ಟಿ.ಸಿ. ರಮಾ ನೇತೃತ್ವದಲ್ಲಿ ಆಶಾ ಮುಖಂಡರ ನಿಯೋಗ ಆರೋಗ್ಯ ಸೌಧಕ್ಕೆ ತೆರಳಿ NHM MD ಅವಿನಾಶ್ ಮೆನನ್ ಅವರಿಗೆ ಮನವಿ ಪತ್ರ ಸಲ್ಲಿಸಿತು. ಮೆನನ್ ರವರು ಬಾಕಿ ಇರುವ NHM ಪ್ರೋತ್ಸಾಹ ಧನವನ್ನು ಈ ಸೋಮವಾರದ ಒಳಗೆ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ಹೋರಾಟದಲ್ಲಿ ಆಶಾ ಸಂಘದ ಬೆಂಗಳೂರು(GBA) ಜಿಲ್ಲಾ ಅಧ್ಯಕ್ಷರಾದ ಫರಾನಾ, ಜಿಲ್ಲಾ ಕಾರ್ಯದರ್ಶಿ ಮಮತಾ ಮತ್ತು ಉಪಾಧ್ಯಕ್ಷರಾದ ಸುಮಿತ್ರ, ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷರಾದ ಶಶಿಕಲಾ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *