ಮೈಸೂರು ವಿವಿ: ಸೃಷ್ಠಿ ಕಾಲೇಜ್‌ ಆಫ್‌ ಕಾಮರ್ಸ್ ಅಂಡ್‌ ಮ್ಯಾನೇಜ್‌ಮೆಂಟ್‌ ಅಂಡ್‌ ರಿಸರ್ಚ್ ಸೆಂಟರ್‌ನ ಸಂಶೋಧನಾರ್ಥಿಗಳಿಗೆ PhD ಪದವಿ ಪ್ರದಾನ

ಮೈಸೂರು: ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ 106ನೇ ವಾರ್ಷಿಕ ಘಟಿಕೋತ್ಸವದಲ್ಲಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ‘ಸೃಷ್ಠಿ ಕಾಲೇಜ್‌ ಆಫ್‌ ಕಾಮರ್ಸ್ ಅಂಡ್‌ ಮ್ಯಾನೇಜ್‌ಮೆಂಟ್‌ ಅಂಡ್‌ ರಿಸರ್ಚ್ ಸೆಂಟರ್‌’ನ ವಿವಿಧ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಸೃಷ್ಠಿ ಕಾಲೇಜ್‌ ಆಫ್‌ ಕಾಮರ್ಸ್ ಅಂಡ್‌ ಮ್ಯಾನೇಜ್‌ಮೆಂಟ್‌ ಅಂಡ್‌ ರಿಸರ್ಚ್ ಸೆಂಟರ್‌ನ ಸಂಸ್ಥಾಪಕ ಅಧ್ಯಕ್ಷರಾದ ಪ್ರೊ. ಗೋಪಾಲ ಕೃಷ್ಣ ಡಿ. ಹಾಗೂ ವಿವಿಧ ವಿಭಾಗದ ಮಾರ್ಗದರ್ಶಕಗಳಾದ ಡಾ. ಕೃಷ್ಣ ಬಿ.ಎಸ್‌, ಡಾ. ಜಿ.ಎನ್.ಕೆ ಸುರುಶ್‌ ಬಾಬು, ಡಾ. ಮಹೇಶ್‌ ಕುಮಾರ್‌ ಕೆ.ಆರ್, ಡಾ. ಗಣೇಶ್‌ ಬಾಬು ಉಪಸ್ಥಿತರಿದ್ದು, ವಾಣಿಜ್ಯ ವಿಭಾಗದ ಸ್ನೇಹ ಆರ್, ಕೋಮಲತಾ ಬಿ.ಸಿ, ಮ್ಯಾನೇಜ್‌ಮೆಂಟ್‌ ವಿಭಾಗದಲ್ಲಿ ನಯನ ಟಿ, ಲೀಲಾವತಿ ಎಸ್‌, ಅರ್ಪಿತ ಶಾಸ್ತ್ರೀ, ಅರುಂಧತಿ ಮತ್ತು ಗಣಕ ವಿಜ್ಞಾನ ವಿಭಾಗದಲ್ಲಿ ಮಲ್ಲರಾಧ್ಯ, ಸಂತೋಷ್‌ ಕುಮಾರ್‌ ಬಿ.ಎನ್, ಪ್ರಕಾಶ್‌ ರಾಜೇ ಅರಸ್‌, ಸುಮನ್‌ ಆಂಟನಿ ಲಸರಾಡೋ, ರಾಯಲ್‌ ಪ್ರವೀಣ್‌ ಡಿಸೋಜ, ನಾಗಲಕ್ಷ್ಮೀ ಇವರುಗಳಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಯಿತು. ಇದೇ ವೇಳೆ ಸೃಷ್ಠಿ ಕಾಲೇಜ್‌ ಆಫ್‌ ಕಾಮರ್ಸ್ ಅಂಡ್‌ ಮ್ಯಾನೇಜ್‌ಮೆಂಟ್‌ ಅಂಡ್‌ ರಿಸರ್ಚ್ ಸೆಂಟರ್‌ನ ಸಂಸ್ಥಾಪಕ ಅಧ್ಯಕ್ಷರಾದ ಪ್ರೊ. ಗೋಪಾಲ ಕೃಷ್ಣ ಡಿ ಮತ್ತು ಬೋಧಕ – ಭೋಧಕೇತರ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *