ರಾಜಕಾರಣಕ್ಕೆ ಸಚಿವ ಚೆಲುವರಾಯಸ್ವಾಮಿ ಪುತ್ರನ ಗ್ರಾಂಡ್ ಎಂಟ್ರಿ.. ಮೊದಲ ಚುನಾವಣೆಯಲ್ಲೇ ಯಶಸ್ಸು

ಮಂಡ್ಯ: ಮಂಡ್ಯ ಡಿ.ಸಿ.ಸಿ ಬ್ಯಾಂಕ್ ಚುನಾವಣೆಯಲ್ಲಿ ಸಚಿನ್ ಚಲುವರಾಯಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಸಚಿನ್ ಸಿ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಚಲುವರಾಜ್ ಅವರು ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿರುವುದರಿಂದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ 5 ವರ್ಷದ ಅವಧಿ ಅಧ್ಯಕ್ಷರಾಗಿ ಸಚಿನ್ ಮತ್ತು ಉಪಾಧ್ಯಕ್ಷರಾಗಿ ಚೆಲುವರಾಜ್ ಆಯ್ಕೆಯಾಗಿದ್ದಾರೆ ಎಂದು ಉಪವಿಭಾಗಾಧಿಕಾರಿ ಶಿವಮೂರ್ತಿ ಪ್ರಕಟಿಸಿದ್ದಾರೆ.

ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿದ ಸಚಿನ್ ಚಲುವರಾಯಸ್ವಾಮಿ, ತಮ್ಮ ಗೆಲುವಿಗೆ ಕಾರಣರಾದ ಪಕ್ಷದ ಎಲ್ಲಾ ಕಾರ್ಯಕರ್ತರು, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಹಾಗೂ ಜಿಲ್ಲೆಯ ಎಲ್ಲಾ ಶಾಸಕರಿಗೂ ಧನ್ಯವಾದ ಮುಖ್ಯ 12 ಜನ ನಿರ್ದೇಶಕರಿಗೂ ಧನ್ಯವಾದ ತಿಳಿಸಿದರು.

ಶಂಕರೇಗೌಡರು ಹಾಗೂ ಚೌಡೇಗೌಡರು ಸ್ಥಾಪಿಸಿದ ಸಂಸ್ಥೆ ಡಿ.ಸಿ.ಸಿ ಬ್ಯಾಂಕ್ ಅಲ್ಲಿಂದಲೂ ಉತ್ತಮ ಕೆಲಸ ಮಾಡಿಕೊಂಡು ಬರುತ್ತಿದೆ. ಕಳೆದ ಎರಡೂವರೆ ವರ್ಷಗಳಿಂದ ಜೋಗಿಗೌಡರು ಸಹ ಉತ್ತಮ ಕಾರ್ಯಗಳನ್ನು ರೂಪಿಸಿಕೊಂಡು ಬಂದಿದೆ. ಮುಂದಿನ ದಿನಗಳಲ್ಲಿ ಡಿ.ಸಿ.ಸಿ ಬ್ಯಾಂಕ್ ನ ಎಲ್ಲಾ ಸಿಬ್ಬಂದಿ ವರ್ಗದ ಜೊತೆ ಸಮನ್ವಯ ಸಾಧಿಸಿ ಉತ್ತಮ ಕೆಲಸ ಮಾಡಲಾಗುವುದು ಎಂದರು.

ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾದ ನರೇಂದ್ರ ಸ್ವಾಮಿಯವರು ಮಾತನಾಡಿ ಮೊದಲೇ ಬಾರಿಗೆ ಹೆಚ್ಚಿನ ಬಹುಮತ ಪಡೆದು ಒಮ್ಮತ ನಿರ್ಧಾರಕ್ಕೆ ಬಂದು ಒಗ್ಗಟ್ಟನ್ನು ಸಾಧಿಸಿದ್ದೇವೆ. ಈ ಒಗ್ಗಟ್ಟು ಸಾಧಿಸು ಸಹಕಾರಿಯಾದ ಎಲ್ಲಾ ನಾಯಕರಿಗೆ ಇದರ ಕೀರ್ತಿ ಸಲ್ಲುತ್ತದೆ ಎಂದು ಹೇಳಿದರು.

Leave a Reply

Your email address will not be published. Required fields are marked *