ಕಾರವಾರದಲ್ಲಿ ‘ವೇದಾಂತ ಪಿಯು ಕಾಲೇಜು’ ವಿದ್ಯಾರ್ಥಿವೇತನ ಪರೀಕ್ಷೆ

ಮಂಗಳೂರು: ಮಂಗಳೂರಿನ ಖ್ಯಾತ ವೇದಾಂತ ಪದವಿಪೂರ್ವ ಕಾಲೇಜು ಮುಂದಿನ ಶೈಕ್ಷಣಿಕ ವರ್ಷದ ಪ್ರವೇಶಕ್ಕಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಮುಂದುವರಿಸಿದೆ. ರಾಜ್ಯದ ವಿವಿಧೆಡೆಗಳಿಂದ ವಿದ್ಯಾರ್ಥಿಗಳನ್ನು ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತಿದ್ದು, ಆಯ್ಕೆಯಾದವರಿಗೆ ಉಚಿತ ಪ್ರವೇಶ ಮತ್ತು ಕೆಲವರಿಗೆ ವಿದ್ಯಾರ್ಥಿವೇತನದ ಸೌಲಭ್ಯ ಕಲ್ಪಿಸಲಾಗಿದೆ.

IITIANS ಮತ್ತು ವೈದ್ಯರು ಸ್ಥಾಪಿಸಿದ ಮಂಗಳೂರಿನ ಮೊದಲ ಪಿಯು ಕಾಲೇಜು ಎಂಬ ಖ್ಯಾತಿ ಪಡೆದ ವೇದಾಂತ ಪಿಯು ಕಾಲೇಜು ವತಿಯಿಂದ ಉಚಿತ ವಿದ್ಯಾರ್ಥಿವೇತನ ಪರೀಕ್ಷೆ ನವೆಂಬರ್ 16, 2025 (ಭಾನುವಾರ)ರಂದು ಕಾರವಾರದಲ್ಲಿ ನಡೆಯಲಿದೆ.

ಪರೀಕ್ಷಾ ಸ್ಥಳ: ಶಿವಾಜಿ ಕಾಂಪೊಸಿಟ್ ಪಿಯು ಕಾಲೇಜು, ಚಿಟ್ಟಕುಳ, ಸದಾಶಿವಗಡ, ಕಾರವಾರ ತಾಲ್ಲೂಕು – 581352.

ಈ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಆಸಕ್ತಿ ಹೊಂದಿರುವ ಎಸ್‌ಎಸ್‌ಎಲ್‌ಸಿ (State/CBSE/ICSE) ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, 8 ಮತ್ತು 9ನೇ ತರಗತಿಯ ಗಣಿತ ಹಾಗೂ ವಿಜ್ಞಾನ ವಿಷಯಗಳ ಆಧಾರದ ಮೇಲೆ 60 ನಿಮಿಷಗಳ ಪರೀಕ್ಷೆ ನಡೆಯಲಿದೆ.

ಪರೀಕ್ಷೆಗೆ ನೋಂದಣಿ ಮಾಡಲು ಬಯಸುವವರು ತಮ್ಮ ಹೆಸರು, ಮೊಬೈಲ್ ನಂಬರ್, ಶಾಲೆಯ ಹೆಸರು ಹಾಗೂ ವಿಳಾಸವನ್ನು ವಾಟ್ಸಾಪ್ ಮೂಲಕ 9482662055 ಗೆ ಕಳುಹಿಸಬೇಕೆಂದು ಕಾಲೇಜಿನ ನಿರ್ದೇಶಕ ರಮಾನಾಥ ತಿಳಿಸಿದ್ದಾರೆ.

Leave a Reply

Your email address will not be published. Required fields are marked *