KAS ಅಧಿಕಾರಿಗೆ ಕಾಂಗ್ರೆಸ್ ನಾಯಕನ ಧಮ್ಕಿ; ಸಿಡಿದೆದ್ದ ವನಿತೆಯರು

ಚಿಕ್ಕಬಳ್ಳಾಪುರ: ಬಳ್ಳಾರಿಯಲ್ಲಿನ ಬ್ಯಾನರ್ ಗಲಾಟೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನ ಈ ಬಳಿ ಪಡೆದಿದೆ. ಈ ಬಳ್ಳಾರಿ ಪ್ರಕರಣ ಮಾಸುವ ಮುನ್ನವೇ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದಲ್ಲಿ ಬ್ಯಾನರ್ ರಾಜಕೀಯ ಸರ್ಕಾರೀ ನೌಕರರನ್ನೇ ರೋಚ್ಚಿಗೆಬ್ಬಿಸಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ನಾಯಕ ರಾಜೀವ್ ಗೌಡ ವಿರುದ್ಧ ನಿಂದನೆಯ ಗಂಭೀರ ಆರೋಪ ಕೇಳಿ ಬಂದಿದೆ. ನಗರಸಭೆ ಪೌರಾಯುಕ್ತೆಗೆ ರಾಜೀವ್ ಗೌಡ ಧಮ್ಕಿ ಹಾಕಿರುವ ಆರೋಪ ಕೇಳಿ ಬಂದಿದೆ. ರಾಜೀವ್ ಗೌಡ ಮಾತನಾಡಿದ್ದಾರೆ ಎಂಬ ಆಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾಂಗ್ರೆಸ್ ನಾಯಕನ ಧಮ್ಕಿ ಖಂಡಿಸಿ ಸರ್ಕಾರೀ ನೌಕರರು ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ, ಕಾಂಗ್ರೆಸ್ ನಾಯಕನ ಬೆದರಿಕೆ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಾಂದ್ಲಾಜೆ ಆಕ್ರೋಶ ಹೊರಹಾಕಿದ್ದಾರೆ.

ಮಹಿಳೆಯರ ಮೇಲೆ ದೌರ್ಜನ್ಯ, ಪ್ರಾಮಾಣಿಕ ಅಧಿಕಾರಿಗಳಿಗೆ ಬೆದರಿಕೆ ಪ್ರಕರಣಗಳು ಕರ್ನಾಟಕದಲ್ಲಿ ‘ಕಾಂಗ್ರೆಸ್ ಸಂಸ್ಕೃತಿ’ ಎಂಬಂತಿದೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

“ಗೂಂಡಾ ರಾಜ್” ಇನ್ನು ಮುಂದೆ ಬೀದಿಗಳಲ್ಲಿ ಮಾತ್ರವಲ್ಲ, ವ್ಯವಸ್ಥೆಯ ಒಳಗೂ ಇದೆ ಎಂದು ಉದಾಹರಿಸಿರುವ ಶೋಭಾ, ‘ಶಿಡ್ಲಘಟ್ಟ ನಗರಸಭೆಯ ಆಯುಕ್ತೆ ಅಮೃತ ಗೌಡ ಅವರು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು, ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನು ಉಂಟುಮಾಡುವ ಅಕ್ರಮ ಬ್ಯಾನರ್‌ಗಳನ್ನು ತೆಗೆದುಹಾಕುತ್ತಿದ್ದರು. ಅವರ ಪ್ರತಿಫಲ? ಕಾಂಗ್ರೆಸ್ ನಾಯಕರಿಂದ ಕೆಟ್ಟ ನಿಂದನೆ ಮತ್ತು ಬಹಿರಂಗ ಬೆದರಿಕೆಗಳು’ ಎಂದು ತಮ್ಮ X ಖಾತೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

“ಇದು ಮಹಿಳಾ ಸಬಲೀಕರಣ ಕುರಿತ ನಿಮ್ಮ ವ್ಯಾಖ್ಯಾನವೇ? ನೀವು ನಿಮ್ಮ ಸ್ವಂತ ಪಕ್ಷದ ಗೂಂಡಾಗಳ ವಿರುದ್ಧ ಕ್ರಮ ಕೈಗೊಳ್ಳುತ್ತೀರಾ ಅಥವಾ ಕಾನೂನನ್ನು ಎತ್ತಿಹಿಡಿದ ಪ್ರಾಮಾಣಿಕ ಮಹಿಳಾ ಅಧಿಕಾರಿಯನ್ನು ಬಲಿಪಶುವನ್ನಾಗಿ ಮಾಡುತ್ತೀರಾ?” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ.ಪರಮೇಶ್ವರ್ ಅವರನ್ನು ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *