ಸಿದ್ದು-ಡಿಕೆಶಿ ‘ಬ್ರೇಕ್ ಫಾಸ್ಟ್’ ಸೂತ್ರಧಾರ ಇವರು? ಕರ್ನಾಟಕದ ಒಗ್ಗಟ್ಟು ಬಗ್ಗೆ ನಿಮಗೆ ಗೊತ್ತಾಗುತ್ತೆ ಎಂದ ವೇಣುಗೋಪಾಲ್

ತಿರುವನಂತಪುರಂ: ಕರ್ನಾಟಕ ರಾಜ್ಯ ಕಾಂಗ್ರೆಸ್ ನಾಯಕತ್ವ ಬಿಕ್ಕಟ್ಟು ಶಮನಕ್ಕೆ ಎಐಸಿಸಿ ಬ್ರೇಕ್ ಫಾಸ್ಟ್ ಸೂತ್ರ ನೀಡಿದ್ದು ಅದರಲ್ಲಿ ಭಾಗಶಃ ಯಶಸ್ವಿಯಾದಂತಿದೆ.

ಮುಂದಿನ ಅವಧಿಗೆ ಮುಖ್ಯಮಂತ್ರಿ ಸ್ಥಾನವನ್ನು ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರಿಗೆ ವಹಿಸಬೇಕೆಂಬ ಬೆಂಬಲಿಗರ ಆಗ್ರಹವು ಕಾಂಗ್ರೆಸ್ ಹೈಕಮಾಂಡ್ ನಾಯಕರ ನಿದ್ದೆಗೆಡಿಸಿದೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿನ ಸೋಲಿನ ಆಘಾತದಿಂದ ಹೊರಬರಲಾಗದ ಕಾಂಗ್ರೆಸ್ಸಿಗೆ ಕರ್ನಾಟಕ ರಾಜಕಾರಣ ಸವಾಲೆಂಬಂತಿದೆ. ಹಾಗಾಗಿ ಡಿಕೆಶಿ ಬಣವನ್ನು ತೃಪ್ತಿಪಡಿಸಲು ಹರಸಾಹಸ ನಡೆಸಿರುವ ಕಾಂಗ್ರೆಸ್ ಹೈಕಮಾಂಡ್ ಆ ಪ್ರಯತ್ನವನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಟ್ಟಿದೆ.

ತಮ್ಮ ಪರವಾಗಿ ಬ್ಯಾಟ್ ಮಾಡುತ್ತಾ ಬಂದಿರುವ ಕೆ.ಸಿ.ವೇಣುಗೋಪಾಲ್ ಮೂಲಕ ರಾಹುಲ್ ಗಾಂಧಿ ಅವರ ಮನವೊಲಿಸುತ್ತಿದ್ದ ಸಿದ್ದರಾಮಯ್ಯ, ಈ ಬಾರಿಯೂ ವೇಣುಗೋಪಾಲ್ ಅವರ ಬಲವನ್ನು ನೆಚ್ಚಿಕೊಂಡಿದ್ದರು. ಹಾಗಾಗಿ ಹೈಕಮಾಡ್ ಸೂತ್ರದಂತೆ ಸಿದ್ದರಾಮಯ್ಯ ಅವರು ಬ್ರೇಕ್ ಫಾಸ್ಟ್ ಆಯೋಜಿಸಿದ್ದರು. ಅಷ್ಟೇ ಅಲ್ಲ, ಹೈಕಮಾಡ್ ನೀಡಿರುವ ಎಚ್ಚರಿಕೆಯ ಸಂದೇಶವನ್ನೂ ಸಿದ್ದರಾಮಯ್ಯ ಅವರು ಡಿಕೆಶಿಗೆ ರವಾನಿಸಿದ್ದಾರೆ. ತಕ್ಷಣಕ್ಕೆ ಸುಮ್ಮನಾಗಲು ಡಿಕೆಶಿ ಕೂಡ ನಿರ್ಧರಿಸಿದ್ದಾರೆ.

ಈ ವಿಚಾರದಲ್ಲಿ ಕೆ.ಸಿ.ವೇಣುಗೋಪಾಲ್ ಅವರಿಗೂ ವಿಶ್ವಾಸ ಇತ್ತು. ಹಾಗಾಗಿಯೇ ತಿರುವನಂತಪುರದಲ್ಲಿ ಶನಿವಾರ  ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕರ್ನಾಟಕ ರಾಜಕಾರಣ ಬಗ್ಗೆ ಅತೀವ ವಿಶ್ವದ ಮಾತುಗಳನ್ನಾಡಿದ್ದಾರೆ. ಕರ್ನಾಟಕ ಬೆಳವಣಿಗೆ ಬಗ್ಗೆ ಗಮನಿಸಿ, ಅಲ್ಲಿನ ಕಾಂಗ್ರೆಸ್ ನಾಯಕ ಒಗ್ಗಟ್ಟು ಬಗ್ಗೆ  ಗೊತ್ತಾಗುತ್ತದೆ ಎಂದು ವೇಣುಗೋಪಾಲ್ ಹೇಳಿದ್ದಾರೆ.

Leave a Reply

Your email address will not be published. Required fields are marked *